ಶಾಸಕ ಆನಂದ್​ ಸಿಂಗ್​ ಮತ್ತೆ ಆಸ್ಪತ್ರೆಗೆ ದಾಖಲು…

227
firstsuddi

ಬೆಂಗಳೂರು:   ಈಗಲ್ಟನ್​ ರೆಸಾರ್ಟ್​​ನಲ್ಲಿ  ಕಂಪ್ಲಿ ಗಣೇಶ್ ಹಲ್ಲೆ ಮಾಡಿ ಗಾಯಗೊಂಡಿದ್ದ ಶಾಸಕ ಆನಂದ್ ಸಿಂಗ್ ಅವರು ಇಂದು  ವಿಧಾನಮಂಡಲ ಅಧಿವೇಶನಕ್ಕೆ  ಕಪ್ಪು ಕನ್ನಡಕ ಧರಿಸಿಕೊಂಡೇ  ಹಾಜರಾಗಿದ್ದರು. ಆದರೆ ಅಧಿವೇಶನದ ಬಳಿಕ ಮನೆಗೆ ತೆರಳಿದ ನಂತರ   ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮತ್ತೆ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.