ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಹೊಸ ನರ್ಸಿಂಗ್ ಹೋಂ ಪರವಾನಗಿ ಅಸಾಧ್ಯ : ಹಾಸನ ಜಿಲ್ಲಾಧಿಕಾರಿ

894

ಹಾಸನ : ಸೂಕ್ತ ಪಾರ್ಕಿಂಗ್ ವ್ಯವಸ್ತೆಗಳಿಲ್ಲದೆ ಹೊಸದಾಗಿ ಅರ್ಜಿ ಸಲ್ಲಿಸುವ ಖಾಸಗಿ ನರ್ಸಿಂಗ್ ಹೋಂಗಳಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಕೇಂದ್ರಗಳ ಕುರಿತು ಸಭೆ ನಡೆಸಿದ ಅವರು ಸಾರ್ವಜನಿಕ ಹಿತಾಸಕ್ತಿ ಸಂರಕ್ಷಣೆ ಮೊದಲ ಆಧ್ಯತೆಯಾಗಬೇಕು ಎಂದರು.

ಆರೋಗ್ಯ ಸೇವೆಯಲ್ಲಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಿರುವುದು ಅಭಿನಂದನಾರ್ಹ ಆದರೆ ನಿಯಮಗಳ ಪಾಲನೆಯಾಗಬೇಕು. ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳನ್ನು ಅನುಸರಿಸಬೇಕು ಎಂದು ಹೇಳಿದರು. ನೊಂದಣಿ ರಹಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದು ಶಿಕ್ಷಾರ್ಹ ಅಪರಾದ ಆದರೆ ಪಾರಂಪರಿಕ ವೈದ್ಯ ಪದ್ದತಿ ಅನುಸರಿಸುತ್ತಿರುವ ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಣೆ ತಂದಿರುವುದರಿಂದ ಕಾನೂನು ಸಲಹೆಗಾರರ ಮಾರ್ಗದರ್ಶನ ಪಡೆದು ನಕಲಿ ವೈದ್ಯರ ವಿರುದ್ದ ಮುಂದಿನ ಕ್ರಮವಹಿಸಿ. ಇದಕ್ಕಾಗಿ ಅಗತ್ಯವಿರುವ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೆಂಕಟೇಶ್ ಅವರಿಗೆ ಸೂಚನೆ ನೀಡಿದರು .

ಕೆ.ಪಿ.ಎಂ.ಇ ಗೆ ಸಂಬಂಧಿಸಿದಂತೆ ಬಂದಿರುವ ವಿವಿಧ ಅರ್ಜಿಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಖಾಸಗಿ ಲ್ಯಾಬ್ ನಡೆಸುವವರು ನಿಯಮಾನುಸಾರ ಅಗತ್ಯವಿರುವ ತಜ್ಞ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು ಕಡ್ಡಾಯ ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿನ ಖಾಸಗಿ ವೈದ್ಯಕೀಯ ಕೇಂದ್ರಗಳ ವಿವರ ನಿಯಮ ಪಾಲನೆ ಮಾಡದೇ ಇರುವ ಸಂಸ್ಥೆಗಳು ಹಾಗೂ ಇತರ ಸಮಸ್ಯೆಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ// ವೆಂಕಟೇಶ್ ಸಭೆಯ ಗಮನಕ್ಕೆ ತಂದರು.

LEAVE A REPLY

Please enter your comment!
Please enter your name here