ಸ್ವಯಂ ಘೋಷಿತ ತೆರಿಗೆಯನ್ನು ಪಾವತಿ ಮಾಡುವಲ್ಲಿ ವಿಳಂಬ ಮಾಡಿರುವವರ ವಿರುದ್ದ ನೋಟೀಸ್ ಜಾರಿಗೊಳಿಸಿ

447

ಹಾಸನ : ಸ್ವಯಂ ಘೋಷಿತ ತೆರಿಗೆಯನ್ನು ಪಾವತಿ ಮಾಡುವಲ್ಲಿ ವಿಳಂಬ ಮಾಡಿರುವವರ ವಿರುದ್ದ ನೋಟೀಸ್ ಜಾರಿಗೊಳಿಸಿ ತೆರಿಗೆಯನ್ನು ವಸೂಲಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆ ಮತ್ತು ನಗರ ಸ್ಥಳೀಯ ಅಭಿವೃದ್ಧಿ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸಭೆಯಲ್ಲಿ ನೀರಿನ ತೆರಿಗೆ , ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಆದಷ್ಟು ಬೇಗ ವಸೂಲಿ ಮಾಡುವುದರ ಮೂಲಕ ನಗರ ಸ್ಥಳೀಯ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಳವಣಿಗೆ ಹೊಂದುವಂತೆ ಮಾಡಿ ಎಂದರು.

ನಗರೋತ್ಥಾನ ಯೋಜನೆ ಹಂತ 2 ರ ಕಾರ್ಯರಂಭ ಮಾಡಲು ಟೆಂಡರ್ ಕರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು ಅಮೃತ ಯೋಜನೆ ಅಡಿಯಲ್ಲಿ ನಗರದ ಮಹಾರಾಜ ಉದ್ಯಾನವನ್ನು ಮಾದರಿಯಾಗಿ ನಿರ್ಮಿಸುವಂತೆ ನಗರಸಭೆ ಆಯುಕ್ತರಾದ ಪರಮೇಶ್ ಅವರಿಗೆ ತಿಳಿಸಿದರು. ಜಿಲ್ಲೆಯಲ್ಲಿ ನಗರಾಭಿವೃದ್ಧಿಯ ಪ್ರಗತಿಯಲ್ಲಿ ಕುಂಠಿತವಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಮತ್ತೊಮ್ಮೆ ಅ.16 ರಂದು ನಗರ ಸ್ಥಳೀಯ ಅಭಿವೃದ್ಧಿ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಅಭಿಯಂತರಾದ ಶಿವಾನಂದ್, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here