ಬಜರಂಗದಳದ ತಾಕತ್ತೇನು ಅಂತಾ ಡಿ.3 ಕ್ಕೆ ದತ್ತಪೀಠದಲ್ಲಿ ತೋರಿಸ್ತೇವೆ, 1992ರ ಅಯೋಧ್ಯಾ ಮಾದರಿ ಹೋರಾಟ ಮಾಡ್ತೇವೆ

1735

ಚಿಕ್ಕಮಗಳೂರು : ಹಿಂದೂ ಮುಸ್ಲೀಂರ ವಿವಾದಿತ ಕೇಂದ್ರ ಇನಾಂ ದತ್ತಾತ್ರೇಯ ಪೀಠದಲ್ಲಿ ಬಜರಂಗದಳ ಹಾಗೂ ವಿಹೆಚ್ ಪಿ ನೇತೃತತ್ವದಲ್ಲಿ 11 ದಿನಗಳ ಕಾಲ ನಡೆಯುತ ದತ್ತಜಯಂತಿಗೆ ಚಿಕ್ಕಮಗಳೂರಿನಲ್ಲಿ ಚಾಲನೆ ದೊರೆತಿದೆ. ಡಿಸೆಂಬರ್ 3. ಹಿಂದೂ ಸಂಘಟಕರ ಪಾಲಿಗೆ ಶೌರ್ಯದ ದಿನ. ಆ ಶೌರ್ಯದ ದಿನವನ್ನ ಆಚರಿಸೋಕೆ ಚಿಕ್ಕಮಗಳೂರಿನ ದತ್ತಪೀಠ ಸಜ್ಜಾಗಿದೆ. 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಹೋರಾಟ ಚಿಕ್ಕಮಗಳೂರಲ್ಲಿ ಮರುಕಳಿಸುತ್ತೆ ಎಂದು ಹಿಂದೂ ಸಂಘಟಕರು ಘಂಟಘೋಷವಾಗಿ ಹೇಳ್ತಿದ್ದಾರೆ. ಜಿಲ್ಲಾಡಳಿತ ರಥಯಾತ್ರೆಗೆ ಬ್ರೇಕ್ ಹಾಕಿರೋದು ಹಿಂದೂ ಸಂಘಟಕರಲ್ಲಿ ಹಠ ತರಿಸಿದೆ. ನಾವು ರಾಜಕೀಯ ಮಾಡೋದಕ್ಕೆ ರಥಯಾತ್ರೆ ತಂದಿರಲಿಲ್ಲ.

ಸರ್ಕಾರ ಬಂದಾಗಿನಿಂದ ಮಾಡ್ತಿರೋದು ಹಿಂದೂಗಳ ಹೋರಾಟವನ್ನ ಹತ್ತಿಕ್ಕುವಂತಹಾ ಕೆಲಸ. ಇದು ಮುಸ್ಲಿಂ ಓಲೈಕೆಯ ಸರ್ಕಾರ ಅನ್ನೋದು ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಬೆದರಿಕೆಗೆ ನಾವು ಅಂಜಿ, ಅಳುಕಿ ಮನೆಯಲ್ಲಿ ಕೂರೋರಲ್ಲ. ಡಿಸೆಂಬರ್ 3ನೇ ತಾರೀಖು ನೀವು ದತ್ತಪೀಠದಲ್ಲಿರೋ ಘೋರಿಗಳನ್ನ ಸ್ಥಳಾಂತರ ಮಾಡದಿದ್ರೆ ಹಿಂದೂ ಕಾರ್ಯಕರ್ತರೆ ಆ ಕೆಲಸವನ್ನ ಮಾಡುತ್ತಾರೆಂದು ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ರಥಯಾತ್ರೆಯ ದಾರಿಯಲ್ಲಿ ಮಸೀದಿ, ಚರ್ಚ್ ಇದೆ ಅನ್ನೋದ ಜಿಲ್ಲಾಡಳಿತ, ಈದ್‍ಮಿಲಾದ್ ಮೆರವಣಿಗೆ ದಾರಿಯಲ್ಲೂ ದೇವಾಲಯಗಳಿವೆ ಅವರಿಗೆ ನಿಷೇಧ ಹೇರಿಲ್ಲ ಎಂದು ಪ್ರಶ್ನಿಸಿದ್ದಾರೆ.

ದತ್ತಜಯಂತಿಯ ಅಂಗವಾಗಿ ಚಿಕ್ಕಮಗಳೂರಿನ ಎಲ್ಲಾ ಊರುಗಳಲ್ಲಿ ರಥಯಾತ್ರೆಯ ಮೂಲಕ ಸಾರ್ವಜನಿಕರಿಗೆ ದತ್ತಪೀಠದ ಮಾಹಿತಿ ನೀಡಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆದ್ರೆ, ಜಿಲ್ಲಾಡಳಿತ ಈದ್‍ಮಿಲಾದ್ ಹಬ್ಬದ ನೆಪವೊಡ್ಡಿ ನಮಗೆ ಅನುಮತಿ ನೀಡಿಲ್ಲ. ಆದ್ರೆ, ಸರ್ಕಾರದ ಕೈಗೊಂಬೆಯಾಗಿರೋ ಜಿಲ್ಲಾಡಳಿತ ಬೇಕೆಂದೆ ನಮಗೆ ಅನುಮತಿ ನೀಡಿಲ್ಲ. ನಾವು ಮಾಡ್ತಿರೋ ಯಾತ್ರೆ ಯಾರ ವಿರುದ್ಧವೂ ಅಲ್ಲ, ರಾಜಕೀಯವೂ ಅಲ್ಲ. ಆದ್ರೆ, ಜಿಲ್ಲಾಡಳಿತ ಸರ್ಕಾರದ ಜೊತೆಗೂಡಿ ನಮ್ಮನ್ನ ಹತ್ತಿಕ್ಕಲು ಮುಂದಾಗಿದೆ. ಆದ್ರೆ, ದೇಶಾದ್ಯಂತ ಎಲ್ಲೇ, ಎಷ್ಟೆ ದೊಡ್ಡ ಕಾರ್ಯಕ್ರಮವಾದ್ರು ಬಂದೋಬಸ್ತ್ ಕಲ್ಪಿಸೋ ರಕ್ಷಣಾ ಇಲಾಖೆ, ಅವರಿಗೆ ತೊಂದರೆಯಾಗುತ್ತೆಂದು ನಮ್ಮ ರಥಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿರೋದು ಸರ್ಕಾರ ಹಾಗೂ ಜಿಲ್ಲಾಡಳಿತದ ದೌರ್ಬಲ್ಯವನ್ನ ಎತ್ತಿಹಿಡಿಯುತ್ತೆ ಅಂತಿದ್ದಾರೆ ಹಿಂದೂ ಸಂಘಟಕರು.

LEAVE A REPLY

Please enter your comment!
Please enter your name here