ಬೆಂಗಳೂರು: ನಿನ್ನೆ ಪಕ್ಷೇತರ ಶಾಸಕರಿಬ್ಬರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಆಪರೇಷನ್ ಕಮಲದ ಮೊದಲ ಹಂತ ಎಂದು ಹೇಳಲಾಗಿತ್ತು. ಆದರೆ ಇದೀಗ ಅತೃಪ್ತ ಶಾಸಕರು ಕಳೆದ ಎರಡು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ತೀವ್ರ ಕುತೂಹಲಕ್ಕೆ ಕಾರಣರಾಗಿದ್ದ ಕೆಲ ಶಾಸಕರ ಪೈಕಿ ಹಗರಿಬೊಮ್ಮನ ಹಳ್ಳಿ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್ ಮತ್ತು ಕಂಪ್ಲಿ ಗಣೇಶ್, ಅವರು ಇಂದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.