ತುಮಕೂರು:ನೋಟು ಅಮಾನೀಕರಕಣ ವಿರುದ್ಧ ತುಮಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ.50 ದಿನ ಕಾಲವಕಾಶ ಕೊಡಿ ನೋಟ್ ಬ್ಯಾನ್ನಲ್ಲಿ ಗೆದ್ದು ಬರುತ್ತೇನೆ, ಬರದೆ ಇದ್ದರೆ ನನ್ನನ್ನು ಜೀವಂತವಾಗಿ ಸುಡಿ ಎಂದು ಮೋದಿ ಅವರೇ ಹೇಳಿದ್ದರು.ಮೋದಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜಿನಾಮೆ ನೀಡಬೇಕು.ಮೋದಿಯವರು ಮಾಡಿದ ಕೆಲಸವೆಲ್ಲ ಗುಳ್ಳೆನರಿ ಕೆಲಸ.ಇಂದು ನಡೆಯುತ್ತೀರುವ ಪ್ರತಿಭಟನೆಗೆ ಆ ಗುಳ್ಳೆನರಿ ಮೋದಿಯವರು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.