ಕಾವೇರಿ ವಿಚಾರದಲ್ಲಿ ನಾನೊಬ್ಬ ನಟ ಅಂದು ಈಗ ಮೋದಿ ಬಗ್ಗೆ ಯಾಕಪ್ಪಾ ಮಾತನಾಡ್ತೀಯಾ…. ರೈ ನಡೆಗೆ ಸಿಂಹ ವ್ಯಂಗ್ಯ

599

ಮೈಸೂರು : ಪ್ರಗತಿಪರ ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಗಿ ತಿಂಗಳು ಮುಗಿಯುತ್ತಾ ಬಂದರು ಮೌನ ವಹಿಸಿರೋ ಪ್ರಧಾನಿ ಮೋದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರೋ ಪಂಚಭಾಷಾ ನಟ ಪ್ರಕಾಶ್‌ ರೈ ವಿರುದ್ಧ ಸಂಸದ ಪ್ರತಾಪ್‌‌ ಸಿಂಹ ಕಿಡಿ ಕಾರಿದ್ದಾರೆ. ಕಾವೇರಿ ಬಗ್ಗೆ ಮಾತನಾಡಿದ್ದಾಗ ನಾನೊಬ್ಬ ನಟನಷ್ಟೆ ಎಂದೇಳಿದ್ದ ತಾವು, ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯನವರನ್ನ ಬಿಟ್ಟು ಪ್ರಧಾನಿಯನ್ನೇಕೆ ಎಳೆಯುತ್ತಿದ್ದೀಯಾಪ್ಪಾ ಎಂದು ಟ್ವಿಟರ್ನಲ್ಲಿ ಕಿಡಿ ಕಾರಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಕಾಶ್ ರೈ ಅವರನ್ನ ಮಾಧ್ಯಮದವರು ಪ್ರಶ್ನಿಸಿದಾಗ ನಾನೊಬ್ಬ ನಟನಷ್ಟೆ ಎಂದು ಹೇಳಿಕೆ ನೀಡಿದ್ದರು. ಗೌರಿ ಲಂಕೇಶ್ ಕೊಲೆಯಾಗಿ ತಿಂಗಳು ಕಳೆಯುತ್ತಾ ಬಂದರು ಮೌನವಹಿಸಿರೋ ಪ್ರಧಾನಿ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಮಗೆ ಬಂದಿರೋ ರಾಷ್ಟ್ರೀಯ ಪ್ರಶಸ್ತಿಗಳನ್ನ ವಾಪಸ್ ನೀಡುವ ಬೆದರಿಕೆ ಹಾಕಿದ್ದರು ನಟ ಪ್ರಕಾಶ್ ರೈ.

LEAVE A REPLY

Please enter your comment!
Please enter your name here