ಮೈಸೂರು : ಗರ್ಭಿಣಿ ಪತ್ನಿಯನ್ನು ಕಪಿಲಾ ನದಿಯಲ್ಲಿ ಮುಳುಗಿಸಿ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡಿನ ಬಳಿ ನಡೆದಿದೆ.
ದೇವಿ (28)ಗಂಡನಿಂದ ಕೊಲೆಯಾದ ದುರ್ದೈವಿ. ಮುದ್ದಹಳ್ಳಿ ಗ್ರಾಮದ ರಾಜೇಶ್ ಕೊಲೆ ಮಾಡಿದ ಆರೋಪಿ(ಪತಿ). ನಿನ್ನೆ ನಂಜನಗೂಡು ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ಗೆ ಆರೋಪಿ ರಾಜೇಶ್, ಪತ್ನಿ ದೇವಿ ಮತ್ತು ಮಕ್ಕಳು ಆಗಮಿಸಿದ್ದರು. ಈ ವೇಳೆ ದೇವಾಲಯಕ್ಕೆ ಹೋಗೋಣ ಬಾ ಎಂದು ಕರೆದೊಯ್ದು, ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಪಿಲಾ ನದಿಯಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ದೇವಿಯನ್ನು ಮುಳುಗಿಸಿ ಕೊಲೆ ಮಾಡಿದ್ದಾನೆ. ತನ್ನಿಬ್ಬರು ಮಕ್ಕಳನ್ನು ಕೂಡ ನದಿಯಲ್ಲಿ ಮುಳುಗಿಸಿ ಸಾಯಿಸಲು ಯತ್ನಿಸಿದ್ದ. ಆದರೆ ಇದನ್ನು ನೋಡಿದ ಸ್ಥಳೀಯರು ತಕ್ಷಣ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ










