ಸೂರ್ಯಗ್ರಹಣ-ಅಂಗವಿಕಲತೆ ನಿವಾರಣೆಗೆ ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆ ಭಾಗದವರೆಗೂ ಹೂತಿಟ್ಟ ಪೋಷಕರು…

200
firstsuddi

ಕಲಬುರಗಿ : ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ವಿಚಿತ್ರ ಸನ್ನಿವೇಶ ಕಂಡುಬಂದಿದ್ದು, ಜನರು ಪುನಃ ಮೌಡ್ಯ ಮೆರೆದಿದ್ದಾರೆ. ಜಿಲ್ಲೆಯ ತಾಜಾಸುಲ್ತಾನಪುರ ಹಾಗೂ ಅರ್ಜುಣಗಿ ಎಂಬ ಗ್ರಾಮದಲ್ಲಿ ಇಂದು ಸೂರ್ಯಗ್ರಹಣ ಇರುವುದರಿಂದ ಪೋಷಕರು ಮಕ್ಕಳನ್ನು ಮಣ್ಣಿನಲ್ಲಿ ಕುತ್ತಿಗೆ ಭಾಗದವರೆಗೂ ಹೂತಿಟ್ಟಿದ್ದಾರೆ. ಸೂರ್ಯ ಗ್ರಹಣದ ವೇಳೆ ವಿಕಲಚೇತನ ಮಕ್ಕಳನ್ನು ಹೂತಿಟ್ಟರೆ ಅಂಗವೈಕಲ್ಯ ನಿವಾರಣೆಯಾಗುತ್ತದೆ ಎಂಬ ಮೂಢನಂಬಿಕೆ ಆಚರಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಪೋಷಕರು ಗ್ರಹಣದ ದಿನ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟರೆ ಅಂಗವೈಕಲ್ಯ ನಿವಾರಣೆಯಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಮಕ್ಕಳನ್ನು ಮಣ್ಣಿನಲ್ಲಿ ಹೂತಿಡಲಾಗಿದೆ. ಮಕ್ಕಳು ಆರೋಗ್ಯವಾಗಿರಲಿ ಎಂಬ ಒಂದೇ ಉದ್ದೇಶದಿಂದ ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.