ಸಾಲಬಾಧೆ : ವಿಷಸೇವಿಸಿ ರೈತ ಆತ್ಮಹತ್ಯೆ!

67
firstsuddi

ಹಾವೇರಿ : ಸಾಲಭಾದೆ ತಾಳಲಾರದೇ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೆನ್ನಾಪುರ ತಾಂಡಾದಲ್ಲಿ ನಡೆದಿದೆ.

ಲೋಕಪ್ಪ ಲಮಾಣಿ (52) ಎಂಬಾತ ಆತ್ಮಹತ್ಯೆ ಮಾಡಿಕೊಂಡ ರೈತ. ಆರು ಎಕರೆ ಜಮೀನು ಹೊಂದಿದ್ದ ರೈತ ಲೋಕಪ್ಪ, ಬ್ಯಾಂಕ್ ಮತ್ತು ಕೈಸಾಲ ಅಂತಾ ಏಳೂವರೆ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಈರುಳ್ಳಿ, ಮೆಕ್ಕೆಜೋಳ ಮತ್ತು ಶೇಂಗಾ ಬೆಳೆ ಮಳೆಯಿಂದ ಹಾನಿಯಾಗಿದ್ದಕ್ಕೆ ಬೇಸತ್ತು ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.