ಚಿಕ್ಕಮಗಳೂರು : ನಗರದ ಗೃಹಮಂಡಳಿ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆರು ಲಕ್ಷ ರೂ ವೆಚ್ಚದ ಮಹಾದ್ವಾರ ನಿರ್ಮಾಣ ಕಾಮಗಾರಿ ಸೋಮವಾರ ಆರಂಭಗೊಂಡಿತು. ಅರ್ಚಕ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಮಂದಿರದ ಟ್ರಸ್ಟಿ ಆನಂದ್ ಸಾಯಿ ದಂಪತಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಿತು, ಟ್ರಸ್ಟಿ ಹೇಮಾ ಆನಂದ್, ರುದ್ರೇಶ್, ಯೋಗಾ ನಾಗರಾಜ್, ರಘು, ತ್ರಿವೇಣಿ, ರಾಮಚಂದ್ರ, ಧರ್ಮಣ್ಣ ಹಾಜರಿದ್ದರು.